ವರ್ಣ ಗ್ಯಾಲರಿ
ವರ್ಣ ಗ್ಯಾಲರಿ ಕನ್ನಡ ಭವನದ ಚಾಲುಕ್ಯವಿಭಾಗದ ಎರಡನೇ ಮಹಡಿಯಲ್ಲಿದೆ. ಸುಮಾರು ೨೫-೩೦ಕಲಾಕೃತಿಗಳನ್ನು ಏಕಕಾಲದಲ್ಲಿ ಪ್ರದರ್ಶನಮಾಡುವ ಸಾಮರ್ಥ್ಯ ಹೊಂದಿದೆ. ಈ ಗ್ಯಾಲರಿಯು ಹವಾನಿಯಂತ್ರಣ ವ್ಯವಸ್ಥೆ ಹೊಂದಿದೆ. ಅಕಾಡೆಮಿಯು ಯುವ ಕಲಾವಿದರಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಹೊರಜಿಲ್ಲೆಗಳಿಂದ ಯುವ ಕಲಾವಿದರನ್ನು ಆಹ್ವಾನಿಸಿ ಪ್ರತಿ ತಿಂಗಳು ‘ತಿಂಗಳ ಚಿತ್ರ’ ಯೋಜನೆಯಡಿಯಲ್ಲಿ ಕಲಾಪ್ರದರ್ಶನವನ್ನು ಏರ್ಪಡಿಸಲಾಗುತ್ತಿದೆ. ನಾಲ್ಕು ಕಂದಾಯ ವಿಭಾಗಗಳಿಂದ ವಿಭಾಗಕ್ಕೆ ಒಬ್ಬರಂತೆ ಒಟ್ಟು ನಾಲ್ಕುಜನ ಉದಯೋನ್ಮುಖ ಕಲಾವಿದರನ್ನು ಆಯ್ಕೆಮಾಡಲಾಗುತ್ತಿದೆ. ಅಕಾಡೆಮಿಯ ಪ್ರದರ್ಶನಕ್ಕೆ ಮಾತ್ರವಲ್ಲದೇ ಸಾರ್ವಜನಿಕ ಸಂಘ-ಸAಸ್ಥೆಗಳಿಗೆ ಬಾಡಿಗೆ ದÀರದಲ್ಲಿ ವರ್ಣ ಗ್ಯಾಲರಿಯನ್ನು ನೀಡಲಾಗುವುದು. ಗ್ಯಾಲರಿಗೆ ದಿನಕ್ಕೆ ರೂ.೫೦೦/-ರಂತೆ ಬಾಡಿಗೆದರವನ್ನು ನಿಗದಿಪಡಿಸಿ ನೀಡಲಾಗಿದೆ.





























